ಬೈಂದೂರು ಬಂಟರ ಸಂಘದಿಂದ ಪಿಯುಸಿ ಪಬ್ಲಿಕ್ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

ಬೈಂದೂರು ಬಂಟರ ಸಂಘದಿಂದ ಪಿಯುಸಿ ಪಬ್ಲಿಕ್ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

ಬೈಂದೂರು ಬಂಟರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ ಅವರ ನೇತೃತ್ವದ ಪದಾಧಿಕಾರಿಗಳ ನಿಯೋಗವು ಕಾಲ್ತೋಡು ಗ್ರಾಮದ ಹಳೆ ಕಾಲ್ ತೋಡು ನಿವಾಸಿ ವಿನೋದ ಮತ್ತು ಮಂಜುನಾಥ್ ಶೆಟ್ಟಿ ದಂಪತಿಗಳ ಪುತ್ರಿ ಕುಮಾರಿ ಸನ್ನಿಧಿ ಎಂ ಶೆಟ್ಟಿ ಇವಳು ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ 592 ಅಂಕ ಪಡೆದು ಮಾಡಿದಉತ್ತಮ ಸಾಧನೆ ಪರಿಗಣಿಸಿ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ನಿತಿನ್ ಬಿ ಶೆಟ್ಟಿ, ಉಪಾಧ್ಯಕ್ಷ ಏನ್ ಕರುಣಾಕರ ಶೆಟ್ಟಿ, ಬಂಟರ ಭವನದ ಸಂಚಾಲಕ ವಾದಿರಾಜ ಶೆಟ್ಟಿ, ಪದಾಧಿಕಾರಿಗಳಾದ ಸಂತೋಷ್ ಶೆಟ್ಟಿ, ಗೌರವ್ ಗಾರ್ಮೆಂಟ್ಸ್ ಮನೋಹರ್ ಶೆಟ್ಟಿ, ಉಪ್ಪುಂದ ಜಯರಾಮ್ ಶೆಟ್ಟಿ ಗಂಟೆಹೊಳೆ, ಉದಯಕುಮಾರ್ ಶೆಟ್ಟಿ ಬೆಜೂರು ಉಪಸ್ಥಿತರಿದ್ದು ಶುಭ ಹಾರೈಸಿದರು.

About the Author

You may also like these