ಶ್ರೀ ಜಯಕರ ಶೆಟ್ಟಿಯವರಿಗೆ ಸಾರ್ವಜನಿಕ ಸನ್ಮಾನ

ಶ್ರೀ ಜಯಕರ ಶೆಟ್ಟಿಯವರಿಗೆ ಸಾರ್ವಜನಿಕ ಸನ್ಮಾನ

ಬೈಂದೂರು: ಬಂಟರ ಯಾನೆ ನಾಡವರ ಸಂಘ ರಿ ಬೈಂದೂರು ಇದರ ಆಶ್ರಯದಲ್ಲಿ ಜರಗಿದ ಸಾರ್ವಜನಿಕ ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಜಯಕರ ಶೆಟ್ಟಿ (ಚೇರ್ ಮೆನ್, ರೆಡ್ ಕ್ರಾಸ್ ಸೊಸೈಟಿ, ಕುಂದಾಪುರ) ಯವರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಪೂರ್ವ ಸೇವೆಯನ್ನು ಪರಿಗಣಿಸಿ ಬೈಂದೂರು ಸಾರ್ವಜನಿಕರಿಂದ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಶಶಿಧರ ಶೆಟ್ಟಿ ಸಾಲ್ಗದ್ದೆ ವಹಿಸಿದ್ದರು, ನಿತಿನ್ ಬಿ ಶೆಟ್ಟಿಯವರು ಸ್ವಾಗತಿಸಿದರು. ಅತಿಥಿಗಳಾದ ಶ್ರೀ ಜಯಶೀಲ ಶೆಟ್ಟಿ, ಉದ್ಯಮಿಗಳು ಘಟಪ್ರಭ, ಶ್ರೀ ಶಂಕರ ಶೆಟ್ಟಿ ಕುಂದಾಪುರ, ಶ್ರೀ ಶಿವರಾಮ ಶೆಟ್ಟಿ ಕುಂದಾಪುರ, ಶ್ರೀ ದಿನಕರ ಆರ್ ಶೆಟ್ಟಿ ಬಸ್ರೂರು, ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಸಂದೇಶ ಭಟ್ ಹಾಗು ಬಂಟರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಅನೇಕ ವೈದ್ಯಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಜಯಕರ ಶೆಟ್ಟಿಯವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸಾರ್ವಜನಿಕವಾಗಿ ಸನ್ಮಾನಿಸಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಸಂದೇಶ ಭಟ್ ವಂದಿಸಿದರು.

About the Author

You may also like these