ಬಂಟರ ಯಾನೆ ನಾಡವರ ಸಂಘ ರಿ ಬೈಂದೂರು ಸಾಮಾಜಿಕ ನೆರವು ಬೈಂದೂರು ಬಂಟರ ಸಂಘದ ಆಶ್ರಯದಲ್ಲಿ ಡಾ. ದಿನಕರ್ ಶೆಟ್ಟಿ (ಯು.ಎಸ್. ಎ.) ಅವರ ಕೃಪೆಯಿಂದ ರೂಪಾಯಿ 1,00,000/- ದೇಣಿಗೆಯನ್ನು ಹಕ್ಲಾಡಿ ಲೈಯನ್ಸ್ ಕ್ಲಬ್ ನ (ಸೇವಾ ಸಂಸ್ಥೆ) ಇತ್ತೀಚಿನ ಮಾಸಿಕ ಸಭೆಯ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಘದ ಅಧ್ಯಕ್ಷರಾದ ಶ್ರೀ ಶಶಿಧರ ಶೆಟ್ಟಿ ಸಾಲ್ಗದ್ದೆ ಯವರಿಂದ, ಅಧ್ಯಕ್ಷರಾದ ಡಾ. ಕಿಶೋರ್ ಕುಮಾರ್ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀ ಶಾಂತಾರಾಮ್ ಶೆಟ್ಟಿ, ಕೋಶಾಧಿಕಾರಿ ಶ್ರೀ ನವೀನ್ ಶೆಟ್ಟಿ ಹಾಗು ಕ್ಲಬ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.