SSLC ಪರೀಕ್ಷೆಯಲ್ಲಿ ರಾಜ್ಯದ 9ನೇ ರಾಂಕ್ ಸಾಧಕಿ ಶ್ರೇಯಾ ಶೆಟ್ಟಿಗೆ ಸನ್ಮಾನ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 617 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ ಹಳಗೇರಿ ಶ್ರೀ ಜಯಶೀಲ ಶೆಟ್ಟಿ ಮತ್ತು ಆಜ್ರಿ ಶ್ರೀಮತಿ ಉಷಾ ಶೆಟ್ಟಿ ದಂಪತಿಗಳ ಪುತ್ರಿ ಸಂದೀಪನ ಸಂಸ್ಥೆಯ ವಿದ್ಯಾರ್ಥಿನಿ ಶ್ರೇಯಾ ಶೆಟ್ಟಿ ಇವಳನ್ನು ಬೈಂದೂರು ಬಂಟರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಶ್ರೀ ಸಾಲ್ಗೆದ್ದ ಶಶಿಧರ್ ಶೆಟ್ಟಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕರುಣಾಕರ್ ಶೆಟ್ಟಿ ನೆಲ್ಯಾಡಿ ,ಬೈಂದೂರು ಸಂಘಟನಾ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದು ಅಭಿನಂದಿಸಿದರು

About the Author

You may also like these