ಬಂಟರ ಯಾನೆ ನಾಡವರ ಸಂಘ ಬೈಂದೂರು ಇದರ 30 ರ ಸಂಭ್ರಮದ ಅಧ್ಯಕ್ಷರಾದ ಶ್ರೀ ಶಶಿಧರ ಶೆಟ್ಟಿ ಸಾಲ್ಗದ್ದೆ ಇವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮಾರಣಕಟ್ಟೆ ಮೇಳದ ಕಲಾವಿದರಾದ ಶ್ರೀ ಆನಂದ ಶೆಟ್ಟಿ ಐರ್ಬೈಲ್ ಇವರನ್ನು ಧರ್ಮಪತ್ನಿಯಾದ ಶ್ರೀಮತಿ ಜಯರಾಣಿ ಅವರೊಂದಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆಲೂರು ಬಂಟರ ಉಪಸಂಘದ ಅಧ್ಯಕ್ಷರಾದ ಶ್ರೀ ಸುಬ್ಬಣ್ಣ ಶೆಟ್ಟಿ, ಆಲೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀ ರವಿ ಶೆಟ್ಟಿ ಆಲೂರು, ನಿವೃತ್ತ ಶಿಕ್ಷಕರಾದ ಶ್ರೀ ಭಾಸ್ಕರ ಶೆಟ್ಟಿ ಕೊಪ್ಪರಿಗೆ, ಶ್ರೀ ತೇಜಪ್ಪ ಶೆಟ್ಟಿ ಹೊಸಾಡು, ಕರ್ನಾಟಕ ಬ್ಯಾಂಕ್ ನ ನಿವೃತ್ತ ಶಾಖಾಧಿಕಾರಿ ಹಾಗೂ ಹೊಸಾಡು ಬಂಟರ ಉಪಸಂಘದ ಅಧ್ಯಕ್ಷರಾದ ಶ್ರೀ ರಾಜೀವ್ ಶೆಟ್ಟಿ , ಉದ್ಯಮಿ ಶ್ರೀ ರಿತೇಶ್ ಶೆಟ್ಟಿ ಕೂಕನಾಡು, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ರಾಜು ಶೆಟ್ಟಿ, ಶ್ರೀ ಗುಂಡು ಪೂಜಾರಿ, ಶ್ರೀ ಮಂಜುನಾಥ ಗಾಣಿಗ ಹಾಗೂ ಕುಟುಂಬಂಸ್ಥರು, ಮೊದಲಾದವರು ಉಪಸ್ಥಿತರಿದ್ದರು.
ಕೆ.ಪಿ.ಎಸ್. ಸ್ಕೂಲ್ ಕೋಟೇಶ್ವರದ ಉಪಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಶೆಟ್ಡಿ ಬಂಟ್ವಾಡಿ ಅವರು ಪ್ರಾಸ್ತಾವಿಕ ಮಾತನಾಡಿದರು, ಶ್ರೀ ಸುನಿಲ್ಶೆಟ್ಟಿ ಶಿಕ್ಷಕರು ಹರ್ಕೂರು ಇವರು ಸ್ವಾಗತ ಹಾಗೂ ಧನ್ಯವಾದಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

